ಫೈರ್ಫಾಕ್ಸ್ (firefox) ಬ್ರೌಸರ್ ಚಾಲೆಂಜ್ -ಈ ಲೇಖನದಲ್ಲಿ ಹೆಚ್ಚಿನ ಟ್ಯಾಬ್ ಗಳನ್ನು ತೆಗೆಯಲಿಕ್ಕೆ ಸಾಧ್ಯವೇ ಅಂತ ಕೇಳಿದ್ದೆ ಅಲ್ಲದೇ, ಫೈರ್ಫಾಕ್ಸ್ ಬ್ರೌಸರ್ ಅನ್ನು ಇನ್ನೂ ಫಾಸ್ಟ್ ಆಗಿ ಕೆಲಸ ಮಾಡೋ ಹಾಗೆ ಹ್ಯಾಗೆ ಮಾಡೋದೂ ಅಂತಾನೂ ಒಂದು ಪ್ರಶ್ನೆ ಇತ್ತು ಅಲ್ವೇ?
- ಅದಕ್ಕೆ ಇಲ್ಲೊಂದು ಚಿಕ್ಕ ಅಪ್ಡೇಟ್:-
ನೋ-ಸ್ಕ್ರಿಪ್ಟ್ ಪ್ಲಗಿನ್ ಬಳಸಿ – ನೋ-ಸ್ಕ್ರಿಪ್ಟ್ ಫೈರ್ಫಾಕ್ಸ್ ನ ಒಂದು ಆಡ್-ಆನ್ ತಂತ್ರಾಂಶ ಅಂತಂದ್ರೆ, ಫೈರ್ಫಾಕ್ಸ್ ಇನ್ಸ್ಟಾಲ್ ಆದ ನಂತರ ನಾವು ಐಚ್ಚಿಕವಾಗಿ ಇನ್ಸ್ಟಾಲ್ ಮಾಡಬಹುದಾದ ತಂತ್ರಾಂಶ.
- ನಾವು ಸಾಮಾನ್ಯವಾಗಿ ಬಳಸುವ ಅನೇಕ ವೆಬ್ಸೈಟ್ ಗಳು, ಮತ್ತೆ ಹತ್ತು ಹಲವಾರು ವೆಬ್ಸೈಟ್ ಗಳನ್ನು ತಮ್ಮ ಮೂಲಕ ಸಂಪರ್ಕಿಸಿ ಅನೇಕ ವಿಷಯಗಳನ್ನು ನಿಮಗೆ ತಲುಪಿಸುವ ಕೆಲಸ ಮಾಡುತವೆ. ಅದಕ್ಕೇ ಅಲ್ಲವೇ ಇಂಟರ್ನೆಟ್ ಅನ್ನೋದು, ಮತ್ತದು ಇರೋದು. ಹೀಗಿರುವಾಗ, ಕೆಲವೊಂದು ವೆಬ್ಸೈಟ್ಗಳು ಜಾಹೀರಾತುಗಳನ್ನೂ, ಕೆಲವೊಂದು ಹಾನಿಕಾರಕ ಸ್ಕ್ರಿಪ್ಟ್ (ಒಂದು ಸಣ್ಣ ಜಾವಾ/ವಿಶುಯಲ್ ಬೇಸಿಕ್ ಪ್ರೊಗ್ರಾಮ್) ಇತ್ಯಾದಿಗಳನ್ನೂ ತಮ್ಮ ವೆಬ್ ಪೇಜಿನಲ್ಲಿ ಸೇರಿಸಿಕೊಂಡಿರುತ್ತವೆ. ಇವುಗಳು ನಮಗೆ ಸಾಮಾನ್ಯವಾಗಿ ಬೇಕಿರುವುದಿಲ್ಲ ಅಥವಾ ಅವುಗಳಿಂದ ಕೆಲವೊಮ್ಮೆ ನಮ್ಮ ಕಂಪ್ಯುಟರ್ ಮಾಹಿತಿಯ ಕಳ್ಳತನವೂ ಆಗಬಹುದು. ಇಂತಹ ಸ್ಕ್ರಿಪ್ಟ್ ಮತ್ತು ಬೇರೆ ತಾಣದಿಂದ ಬರುವ ಮಾಹಿತಿಯನ್ನು ತಡೆಹಿಡಿಯಲೆಂದೇ ಇರುವ ತಂತ್ರಾಂಶ ನೋ-ಸ್ಕ್ರಿಪ್ಟ್. ಮುಂದೆ ಓದಿ »