ಲಿನಕ್ಸಾಯಣ - ಕನ್ನಡಿಗನಿಗೊಂದು ಸುಂದರ ಗ್ನು/ಲಿನಕ್ಸ್ ಕೈಪಿಡಿ

ಲಿನಕ್ಸಾಯಣ - ಕನ್ನಡಿಗನಿಗೊಂದು ಸುಂದರ ಗ್ನು/ಲಿನಕ್ಸ್ ಕೈಪಿಡಿ

ಕನ್ನಡ ರಾಜ್ಯೋತ್ಸವದ ಈ ಸುಸಂದರ್ಭದಲ್ಲಿ, ಕನ್ನಡಿಗನಿಗೊಂದು ಸಣ್ಣ ಉಡುಗೊರೆ… ಲಿನಕ್ಸಾಯಣ

ತಂತ್ರಜ್ಞಾನ ಎಲ್ಲರಿಗೆ ತಲುಪುವಂತಾಗಬೇಕು,ಭಾಷೆ ತೊಡಕಾಗಬಾರದು, ದಿನ ನಿತ್ಯದ ಭಾಷೆಯಲ್ಲೇ ಅನೇಕ ವಿಷಯಗಳನ್ನು ನಮ್ಮ ಸುತ್ತಲಿನವರಿಗೆ ತಿಳಿಸಿಕೊಡಲಿಕ್ಕೆ ಸಾಧ್ಯ ಎಂದೆನಿಸಿ ನಾನು ಬರೆಯಲು ಪ್ರಾರಂಭಿಸಿದ್ದ ಗ್ನು/ಲಿನಕ್ಸ್ ಲೇಖನಗಳ ಸರಣಿ “ಲಿನಕ್ಸಾಯಣ” ನಿಮ್ಮಲ್ಲನೇಕರಿಗೆ ಈಗಾಗಲೇ ಪರಿಚಿತ. ಈ ಲೇಖನಗಳು ಈಗ ಸುಲಭವಾಗಿ ನಿಮಗೆಲ್ಲರಿಗೆ ಅದರದ್ದೇ ಅಂತರ್ಜಾಲ ತಾಣ (http://linuxaayana.net) ನಲ್ಲಿ ಲಭ್ಯವಾಗಲಿದೆ.

ಆಟಕ್ಕೆ ಫಲವೇನು? ಕೌತುಕದ ರುಚಿಯೆ ಫಲ|
ಚೀಟಿ ತಾಂ ಬೀಳೆನೆನಲ್ ಆಟ ಸಾಗುವುದೆ?||
ಏಟಾಯ್ತೆ ಗೆಲುವಾಯ್ತೆಯೆಂದು ಕೇಳುವುದೇನು?|
ಆಟದೋಟವೆ ಲಾಭ – ಮಂಕುತಿಮ್ಮ||

ಗ್ನು/ಲಿನಕ್ಸ್ ಕಬ್ಬಿಣದ ಕಡಲೆಯಲ್ಲ, ನಿಮ್ಮ ಕೌತುಕದ ದೃಷ್ಟಿ ಅದರೆಡೆಗೆ ಹರಿದು, ನೀವು ಅದರಲ್ಲಿ ಸ್ವಲ್ಪ ಆಟ ಆಡಿದ್ದೇ ಆದಲ್ಲಿ ಹೊಸ ತಂತ್ರಾಂಶಗಳ, ತಂತ್ರಜ್ಞಾನಗಳನ್ನು ತಿಳಿದುಕೊಳ್ಳಲು ಸಹಾಯವಾಗಲಿದೆ.

ಇದುವರೆಗೆ ಲೇಖನಗಳನ್ನು ಓದಿ, ಚರ್ಚಿಸಿ, ಅವುಗಳ ಸುತ್ತ ಮುತ್ತ ಹರಿದ ಪ್ರಶ್ನೆಗಳನ್ನು ಕಳಿಸಿಕೊಡುತ್ತಾ, ತಪ್ಪಿದಲ್ಲಿ ನನ್ನನ್ನು ತಿದ್ದುತ್ತಾ ಬಂದಿದ್ದೀರಿ. ಇನ್ಮುಂದೆಯೂ ಲಿನಕ್ಸಾಯಣದಲ್ಲಿ ಬರುವ ಲೇಖಗಳಿಗೂ, ಸುತ್ತಮುತ್ತಲಿನ ಕಾರ್ಯಚಟುವಟಿಕೆಗಳಿಗೂ ನಿಮ್ಮ ಬೆಂಬಲವಿರಲಿ ಎಂದು ಕೇಳಿಕೊಳ್ಳುತ್ತ.

ವಿ.ಸೂ:- ನಿಮಗೂ ನನ್ನ ಈ ಒಂದು ಕಾರ್ಯದಲ್ಲಿ ಸಹಾಯ ಹಸ್ತ ಚಾಚಬಹುದು ಎಂದೆನಿಸಿದಲ್ಲಿ ಖಂಡಿತ ನನಗೊಂದು ಮೈಲಾಯಿಸಿ.

Tags: , , , ,

Leave a Reply

You can use these tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong> <pre lang="" line="" escaped="">