ಹಿತ್ತಲಲಿ ಕುಳಿತು ಮಂಗಳನ ಅಂಗಳ ನೋಡೋಣ್ವಾ?
ಹೌದು.. ಇವತ್ತು ಮಂಗಳನ ದರ್ಶನ ಸುಲಭ ಸಾಧ್ಯ… ಅವನು ಭೂಮಿಯ ಹತ್ತಿರಕ್ಕೆ ಸರಿಯುತ್ತಿದ್ದಾನೆ. ಮತ್ತೆ ಈ ಅವಕಾಶ ದೊರೆಯುವುದು ೨೦೧೪ ರಲ್ಲಿ. ಕೆಲತಿಂಗಳುಗಳಿಂದ ಪೂರ್ವದ ಕಡೆ ಮುಖ ಮಾಡಿ ನೋಡಿದೆಡೆ ಕೆಂಬಣ್ಣದ, ನಕ್ಷತ್ರದಂತೆ ಕಾಣುವ ಉದಯಿಸುತ್ತಿರುವ ಮಂಗಳನನ್ನು ಕಾಣಬಹುದಾಗಿದೆ.
ಇಂದು ರಾತ್ರಿ ಮಂಗಳ ಭೂಮಿಗೆ ೬೧ ಮಿಲಿಯನ್ ಮೈಲುಗಳಷ್ಟು ಬಳಿಸಾರಲಿದೆ, ಅಂದರೆ ೯೮ ಮಿಲಿಯನ್ ಕಿಲೋಮೀಟರುಗಳು. ಇಷ್ಟು ಸಾಕು, ಖಗೋಳಾಭ್ಯಾಸ ನೆಡೆಸುತ್ತಿರುವ ಹವ್ಯಾಸಿಗಳು ತಮ್ಮ ವಿಶೇಷ ಉಪಕರಣಗಳನ್ನು ಮಂಗಳನತ್ತ ತಿರುಗಿಸಿ ಅಲ್ಲಿನ ಮೇಲೈ ಬಗೆಗಿನ ವಿಷಯಗಳನ್ನು ಸೆರೆಹಿಡಿಯಲು.