Reaching out to others! Free & Open Source Software, Kannada, L10n, L18n Data Science, Cloud Computing & more…

ಅಗ್ಮೆಂಟೆಡ್ ರಿಯಾಲಿಟಿ – ರಿಯಲ್ ಪ್ರಪಂಚಕ್ಕೊಂದು ವರ್ಚುಅಲ್ ಟಚ್

ಟರ್ಮಿನೇಟರ್ ನನ್ನೂ ಮೀರಿಸುವ ದೃಷ್ಟಿ ಬೇಕೆ? ಇನ್ನು ಕೆಲವೇ ವರ್ಷಗಳಲ್ಲಿ ನಿಮ್ಮ ಕಣ್ಣಿನಲ್ಲಿರು ಸಾಮಾನ್ಯ ಕಾಂಟ್ಯಾಕ್ಟ್ ಲೆನ್ಸ್ ಗಳು ಸೋಲಾರ್ ಪವರ್ ನಿಂದ ಶಕ್ತಿಪಡೆಯಬಲ್ಲ ವಿಶಿಷ್ಟ ಆಗ್ಮೆಂಟೆಡ್ ಲೆನ್ಸ್ ಗಳಿಂದ ಬದಲಾಯಿಸಲ್ಪಡುತ್ತವೆ. ಯುನಿವರ್ಸಿಟಿ ಆಫ್ ವಾಶಿಂಗ್ಟನ್ ಪ್ರೊಫೆಸರ್ ಬಬಕ್ ಅಮಿರ್ ಪರ್ವಿಜ್ ಮತ್ತು ಅವರ ಶಿಷ್ಯರು ಆಗ್ಮೆಂಟೆಡ್ ರಿಯಾಲಿಟಿ ತಂತ್ರಜ್ಞಾನದ ಉಪಯೋಗವನ್ನು ಮೊಬೈಲ್ ಇತ್ಯಾದಿಗಳಿಂದ ಹೊರತಾಗಿ ಮನುಷ್ಯನ ಕಣ್ಣಿನಲ್ಲೂ ಬಳಸಬಹುದಾದ ಯೋಜನೆಯ ಮೇಲೆ ಕೆಲಸ ಮಾಡುತ್ತಿರುವುದೇ ಇದರ ಹಿಂದಿನ ರಹಸ್ಯವಾಗಿದೆ. ಈ ತಂತ್ರಜ್ಞಾನ ನೂರಾರು ಸೆಮಿಟ್ರಾನ್ಸ್ಪರಂಟ್ ಎಲ್.ಇ.ಡಿ ಗಳನ್ನು ಒಂದು ಸಣ್ಣ ಲೆನ್ಸ್ ನ ಮೇಲೆ ಸೇರಿಸಿ, ಅದನ್ನು ಧರಿಸುವ ಮನುಷ್ಯನಿಗೆ ಆಗ್ಮೆಂಟೆಡ್ ರಿಯಾಲಿಟಿಯ ಅನುಭವವನ್ನು ಅವನ ಕಣ್ಣುಗಳಿಂದಲೇ ಪಡೆಯುವ ಅವಕಾಶ ಮಾಡಿಕೊಡುತ್ತದೆ.


ಕಂಪ್ಯೂಟರಿನ ಸಹಾಯದಿಂದಭೌತಿಕ ಪ್ರಪಂಚದ ಚಿತ್ರವನ್ನು ಬಹು ನೈಜವೇ, ಸಹಜವೇ ಆದಂತೆ ತೋರುವ ವರ್ಚ್ಯಲ್ ದೃಶ್ಯಗಳನ್ನು, ನೇರವಾಗಿ ಅಥವಾ ಕಂಪ್ಯೂಟರಿನ ಸಹಾಯದಿಂದ ಇತರರಿಗೆ ದೊರೆಯುವಂತೆ ಮಾಡುವುದೇ ಆಗ್ಮೆಟೆಂಡ್ ರಿಯಾಲಿಟಿ ತಂತ್ರಜ್ಞಾನ. ಕಂಪ್ಯೂಟರಿನ ದೃಷ್ಟಿ ಹಾಗೂ ಅದರ ಶಕ್ತಿಯನ್ನು ಬಳಸಿ, ಜಗತ್ತಿನ ಯಾವುದೇ ಮೂಲೆಯಲ್ಲಿ ಕುಳಿತು ನೋಡಬಹುದಾದ ದೃಶ್ಯಗಳ ಜೊತೆ ಸಂವಾದ ನೆಡೆಸಬಹುದು ಅದೂ ನಾವೂ ಅಲ್ಲೇ ಸಂವಾದ ನೆಡೆಸುತ್ತಿರುವ ವ್ಯಕ್ತಿ ಅಥವಾ ಪ್ರದೇಶದಲ್ಲೇ ಇದ್ದುಕೊಂಡು ಎಂಬಂತಹ ಆಭಾಸದ ಜೊತೆಗೆ. ಕಂಪ್ಯೂಟರಿನ ಸರಿ – ಬೆಸ (೦-೧) ಬೈನರಿ ಸಂಖ್ಯೆಯ ಜಗತ್ತು ನಮ್ಮೊಡನೆ ಮಾತನಾಡುವಂತೆ, ಇನ್ನೆಲ್ಲೋ ಇರುವ ಜಗತ್ತಿನ ಮತ್ತೊಂದು ಪ್ರದೇಶವನ್ನು ನಾನಿದ್ದಲ್ಲೇ ತಂದು ತೋರಿಸುವಂತೆ ಮಾಡುವ ಈ ತಂತ್ರಜ್ಞಾನ ಜಗತ್ತನ್ನು ಮತ್ತೆ ಕಿರಿದಾಗಿಸುತ್ತಿರುವುದಂತೂ ನಿಜ.

ನಿಜ ಬದುಕಿನ ಅಣುಕು ಎಂದೆನ್ನ ಬಹುದಾದ ‘ಆಗ್ಮೆಂಟೆಡ್ ರಿಯಾಲಿಟಿ’ ಎಂಬ ಪದ ಮೊದಲು ಥಾಮಸ್ ಕಡೆಲ್ ಎಂಬಾತನಿಂದ ೧೯೯೦ರಲ್ಲಿ ಬಳಕೆಗೆ ಬಂತು ಎಂದು ನಂಬಲಾಗಿದೆ. ಇತ್ತೀಚೆಗೆ ಈ ತಂತ್ರಜ್ಞಾನ ಕ್ಷೇತ್ರದಲ್ಲಿ ಆಗುತ್ತಿರುವ ಸಂಶೋದನೆಗಳಲ್ಲಿ ಮೇಲೆ ಹೇಳಿದ ಕಣ್ಣಿನ ಲೆನ್ಸ್ ಅಥವಾ ರೆಟಿನಾ ಬಗೆಗಿನ ಸಂಶೋಧನೆಯೂ ಒಂದು.

ನಿಮಗಿದು ಗೊತ್ತೇ?: – ನೋಕಿಯಾ ಎನ್ ೯೫ ಸ್ಮಾರ್ಟ್ ಫೋನ್ ನಲ್ಲಿ ಕೂಡ ನೀವು ಅಗ್ಮೆಟೆಂಡ್ ರಿಯಾಲಿಟಿಯ ಬಳಕೆಯನ್ನು AR Tower Defense Game ನಲ್ಲಿ ನೋಡಬಹುದು. ಇದರಲ್ಲಿ ಫಿಡ್ಯುಸಿಯರಿ ಮಾರ್ಕರ್ ಗಳನ್ನು (ನಿರ್ಧಿಷ್ಟ ಸ್ಥಾನಗಳನ್ನು ಗುರುತಿಟ್ಟುಕೊಳ್ಬಲ್ಲ ಸೂಚಕ)ಬಳಸಲಾಗಿದೆ.

ಅಗ್ಮೆಂಟೆಡ್ ರಿಯಾಲಿಟಿಯ ಮುಖ್ಯ ಹಾರ್ಡ್ವೇರ್ ವಸ್ತುಗಳು ಕಂಪ್ಯೂಟರಿನ ಸ್ಕ್ರೀನ್, ಮೌಸ್, ಕೀ ಬೋರ್ಡ ಇತ್ಯಾದಿ ಇನ್ಪುಟ್ ಡಿವೈಸ್ ಗಳು ಮತ್ತು ಕಂಪ್ಯೂಟರ್. ಶಕ್ತಿಯುತ ಸಿ.ಪಿಯು, ಕ್ಯಾಮೆರ, ವೇಗಮಾಪಕ (accelerometers), ಜಿ.ಪಿ.ಎಸ್ ಹಾಗೂ ಸಾಲಿಡ್ ಸ್ಟೇಟ್ ಕಾಂಪಾಸ್ ಇರುವ ಇತ್ತೀಚಿಗಿನ ಸ್ಮಾರ್ಟ್ ಫೋನುಗಳು ಆಗ್ಮೆಂಟೆಡ್ ರಿಯಾಲಿಟಿಯ ಬಳಕೆಗೆ ಬಹಳ ಅಚ್ಚುಮೆಚ್ಚಿನ ವೇದಿಕೆಯಾಗಿವೆ.

ಜಾಹಿರಾತು ಸಂಸ್ಥೆಗಳು, ಸರ್ಜರಿ ಇತ್ಯಾದಿ ಕ್ಲಿಷ್ಟಕರ ಕೆಲಸಗಳಿಗೆ, ದಿಕ್ಸೂಚಕ ಉಪಕರಣಗಳ ಬಳಕೆ ವಿಸ್ತರಿಸಲು, ಕಾರ್ಖಾನೆಗಳಲ್ಲಿ, ಮಿಲಿಟರಿ ವಲಯದಲ್ಲಿ, ಕೃಷಿ, ಶಿಕ್ಷಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಇದರ ಪ್ರಯೋಗ ಹಾಗೂ ಬಳಕೆ ನಿರಾಯಾಸವಾಗಿ ನೆಡೆಯುತ್ತಿದೆ. ಅಗ್ಮೆಟೆಂಡ್ ರಿಯಾಲಿಟಿ ಎಲ್ಲರ ಜೀವನದಲ್ಲೂ ಸಾಮಾನ್ಯ ಸಂಗತಿಯಾಗುವ ಕಾಲ ದೂರವಿಲ್ಲ.

ವೇಗದ ಬದುಕಿನಲ್ಲಿ ನೆಡೆಯುತ್ತಿರುವ ಕಂಪ್ಯೂಟರ್ ಮಯ ಜಗತ್ತಿನಲ್ಲಿ ಮನುಷ್ಯನ ಮನಸ್ಸನೂ ಹ್ಯಾಕ್ ಮಾಡಿ ವಿಶ್ಲೇಷಿಸುವ ಶಕ್ತಿ ಆಗ್ಮೆಂಟೆಡ್ ರಿಯಾಲಿಟಿಗಿದೆ. ಈ ತಂತ್ರಜ್ಞಾನ ಮನುಷ್ಯನ ವಿವೇಚನಾ ಶಕ್ತಿಯನ್ನೇ ತನ್ನ ಮುಟ್ಟಿಗೆ ತೆಗೆದುಕೊಳ್ಳದೆ ಬದುಕು ಹಸನಾಗಿಸುವ ಹೊಸ ಆಯಾಮವನ್ನು ಸೃಷ್ಟಿಸಿದರೆ ಮುಂಬರುವ ಜನಾಂಗಕ್ಕೆ ಮತ್ತಷ್ಟು ಮೈಲೇಜ್ ಕೊಡಬಲ್ಲದು.

ಚಿತ್ರ: – ಇನ್ಹೆಬಿಟ್ಯಾಟ್ ಡಾಟ್ ಕಾಮ್

Solar Impulse

“Around the world in a solar airplane” – a dream of Solar impulse team will come true in a year or so and they will be on a world trip of 20-25 days around the world with their tiny solar powered airplane.

XV32EW4R4QMW

Solar Impulse is a one seater airplane with four solar powered motors. This plane completes its first runway debut and full fledged tests will begin next year.

solarimpulse

The Solar Impulse isn t the only solar-powered plane gearing for takeoff. The  Odysseus, an autonomous solar-powered surveillance craft, can fly for five years straight using only its solar panels.

Biofuels are the next big thing and there are lots of experiments around the world to make it worthwhile and Solar Impulse is really an impressive one.

Website: https://www.solarimpulse.com/

Source: Inhabitat

ಅಂತರಿಕ್ಷದಲ್ಲಿ ಸೌರಶಕ್ತಿ ಘಟಕ – ಜಪಾನ್ ನ ಹೊಸ ಸಂಶೋದನೆ

spacesolar1

ಚಿಕ್ಕವನಿದ್ದಾಗ ರಿಮೋಟ್ ಕಂಟ್ರೋಲ್ ಗಳ ಬಳಕೆ ಶುರುವಾದಾಗಿನಿಂದ ಮನಸ್ಸಿನಲ್ಲಿದ್ದ ಪ್ರಶ್ನೆಯೊಂದು ಆಗಾಗ ತಲೆ ಕೊರೆಯುತ್ತಿತ್ತು..  ವಿದ್ಯುತ್ ಅನ್ನು ನಿಸ್ತಂತು ಮೂಲದಿಂದ ಪಡೆಯ ಬಹುದೇ, ಹೌದಾದರೆ ಹೇಗೆ? ಇತ್ಯಾದಿ.. ಅದು ಈಗ ಸಾಧ್ಯವಿದೆ ಎಂದು ಜಪಾನ್ ನ ಹೊಸದೊಂದು ಯೋಜನೆ ಹೇಳುತ್ತಿದೆ.

ಇತ್ತೀಚೆಗೆ ಜಪಾನ್ ಅಂತರಿಕ್ಷದಲ್ಲಿ ಸೌರ ವಿದ್ಯುತ್ ಸ್ಥಾವರದ ಸ್ಥಾಪನೆಗೆ ೨೧ ಬಿಲಿಯನ್ ಡಾಲರಿನ ಹೊಸ ಯೋಜನೆಯೊಂದನ್ನು ಹಾಕಿ ಕೊಂಡಿದೆ. ಈ ಸ್ಥಾವರ ಒಂದು ಗಿಗಾವ್ಯಾಟ್ ನಷ್ಟು ವಿದ್ಯುತ್ ಅನ್ನು  ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದ್ದು, ಸುಮಾರು ೨೯೪,೦೦೦ ಮನೆಗಳಿಗೆ ಬೆಳಕು ನೀಡಬಲ್ಲುದು. ಈ ಯೋಜನೆಗೆ ಮಿಸ್ಠುಬಿಶಿ ಎಲೆಕ್ಟ್ರಿಕ್ ಕಂಪನಿ ಮತ್ತು ಐ.ಎಚ್.ಐ ಕಾರ್ಪೊರೇಷನ್ ನ ಬೆಂಬಲವಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ಅಂತರಿಕ್ಷದಲ್ಲಿ ಸಂಗ್ರಹಣೆ ಮಾಡಲಾಗುವ  ವಿದ್ಯುತ್ ಅನ್ನು ಯಾವುದೇ ತಂತಿಗಳ ಅವಶ್ಯಕತೆ ಇಲ್ಲದೆ ಭೂಮಿಗೆ ಸಾಗಿಸಬಹುದಾದ ತಂತ್ರಜ್ಞಾನ ಅಭಿವೃದ್ದಿ ಪಡಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. ಇವೆಲ್ಲಾ ಸಾಂಗವಾಗಿ ನೆರವೇರಿದರೆ ೨೦೧೫ರ ಹೊತ್ತಿಗೆ ಜಪಾನ್ ಸಣ್ಣದೊಂದು ಉಪಗ್ರಹದಲ್ಲಿ ಸೋಲಾರ್ ಫಲಕಗಳನ್ನು ಬಳಸಿ ಈ ಸಂಶೋದನೆಯನ್ನು ಪರೀಕ್ಷಿಸಲಿದೆ.

ಚಿತ್ರ:– ಇನ್ ಹೆಬಿಟ್ಯಾಟ್

ಇದರ ಬಗೆಗಿನ ಹೆಚ್ಚಿನ ಮಾಹಿತಿಗೆ ಇನ್ಹೆಬಿಟ್ಯಾಟ್ ನ ಈ ಕೊಂಡಿ ನೋಡಿ.

ಹೆಚ್ಚಾದದ್ದೊಂದು ಏನಿದಿನ್ನೊಂದು – ಎಚ್೧ಎನ್೧

ಕಳೆದ ಶನಿವಾರ ಇದ್ದಕ್ಕಿದ್ದಂತೆ ಸಂಪದದ ಕೆಲವರ ಕಾಲುಗಳು ಜಯನಗರದತ್ತ ಹೊರಳಿದವು. ದಾರಿಯುದ್ದಕ್ಕೂ ಅಲ್ಲಲ್ಲಿ ತಿಳಿನೀಲಿ ಬಣ್ಣದ ಬಟ್ಟೆಯ ಮುಸುಕುದಾರಿಗಳು ಕಂಡದ್ದು ಮಾತಿನ ವಿಷಯವಾಗಿತ್ತು…

ಮುಂದೆ ಓದಿ »

ಹೆಚ್ಚಾದದ್ದೊಂದು ಏನಿದಿನ್ನೊಂದು – ಎಚ್೧ಎನ್೧

ಕಳೆದ ಶನಿವಾರ ಇದ್ದಕ್ಕಿದ್ದಂತೆ ಸಂಪದದ ಕೆಲವರ ಕಾಲುಗಳು ಜಯನಗರದತ್ತ ಹೊರಳಿದವು. ದಾರಿಯುದ್ದಕ್ಕೂ ಅಲ್ಲಲ್ಲಿ ತಿಳಿನೀಲಿ ಬಣ್ಣದ ಬಟ್ಟೆಯ ಮುಸುಕುದಾರಿಗಳು ಕಂಡದ್ದು ಮಾತಿನ ವಿಷಯವಾಗಿತ್ತು…

ಮುಂದೆ ಓದಿ »

Share/Save

Bhuvan – Still a Gagana Kusum

bhuvan

Indian Space Research Organization (ISRO) is out with its first Indian Earth Observation Visualization tool at – https://bhuvan.nrsc.gov.in/ . So far we all used to depend on google maps and google earth applications to get maps and 3D visualization. Reports say that more than 60000 people registered as soon as this project was launched for its beta testing. But many of us were totally discouraged to usethe application as it was vendor locked by forcing Internet community to stick to Internet explorer, DirectX and other proprietary applications. Internet users such as myself have been using firefox, opera and other browsers where in we can’t see whats really Bhuvan has got for us. Looks like it is totally an ignorance of who ever is responsible to deliver such application. An OS independent application is what is needed when entire web is moving towards web3.0 for better user experience and advancements. A small survey of web users would have been resulted in a good design and solution. Hope ISRO learns this very fast during Bhuvan’s beta testing and come out with the right solution that is needed soon.

Further Readings:-

Deccan Herald report by Deepa Kurup and Divya Gandi has got more info about this – Bouquets and brickbats for Bhuvan mapping portal