Reaching out to others! Free & Open Source Software, Kannada, L10n, L18n Data Science, Cloud Computing & more…

ಗೂಗಲ್ ಕ್ರೋಮ್ ಓ.ಎಸ್ – ಹೊಸ ಆಯಾಮದತ್ತ

Uncategorized | 0 comments

ನಿನ್ನೆ ದಿನ ಗೂಗಲ್ ತನ್ನದೇ ಒಂದು ಹೊಸ ಆಪರೇಟಿಂಗ್ ಸಿಸ್ಟಂ, “ಗೂಗಲ್ ಕ್ರೋಮ್google-chrome-logo OS” ಮೇಲೆ ಕೆಲಸ ಮಾಡುತ್ತಿರುವುದಾಗಿ ಪ್ರಕಟಿಸಿದೆ. ಇದುವರೆಗೂ ಅಲ್ಲಿ ಇಲ್ಲಿ ಗೂಗಲ್ ಓ.ಎಸ್ ಬಗ್ಗೆ ಗಾಳಿ ಸುದ್ದಿ ಹರಡಿ ಚರ್ಚೆ ನಡೆಯುತ್ತಿತ್ತು. ಆದರೆ ಗೂಗಲ್ ಅದರ ಮೇಲೆ ಕೆಲಸ ಮಾಡುತ್ತಿರುವುದು ಕೊನೆಗೂ ನಿಜವಾಗಿದೆ. ಗೂಗಲ್ ಪ್ರಕಾರ ಈ ಆಪರೇಟಿಂಗ್ ಸಿಸ್ಟಂ  ಗ್ನು/ಲಿನಕ್ಸ್ ಮೇಲೆ ಆಧಾರಿತವಾಗಿದ್ದು, ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿರುವ “ನೆಟ್ ಬುಕ್” (ಅಂದರೆ ಇದು ಲ್ಯಾಪ್ಟಾಪ್ ನ ಕಿರು ಆವೃತ್ತಿ ಎನ್ನ ಬಹುದು) ಗಳಲ್ಲಿ ಕೆಲಸಮಾಡುತ್ತದೆಯಂತೆ. ನೆಟ್ ಬುಕ್ ಗಳು ಪ್ರತಿ ಬಳಕೆದಾರನಿಗೂ ಕಡಿಮೆ ಖರ್ಚಿನಲ್ಲಿ ಕಂಪ್ಯೂಟಿಂಗ್ ಸೌಲಭ್ಯ ಕೊಡಲಿದ್ದು, ಎಲ್ಲರನ್ನೂ ಇಂಟರ್ನೆಟ್ ನೊಂದಿಗೆ  ಸುಲಭವಾಗಿ ಕನೆಕ್ಟ್ ಮಾಡುತ್ತವಾದ್ದರಿಂದ, ಸರ್ಚ್ ಎಂಜಿನ್ ಮಹಾಧೈತ್ಯ ಗೂಗಲ್ ಇದನ್ನೇ ಗುರಿಯಾಗಿಸಿಕೊಂಡು, ತನ್ನ ಬಳಕೆದಾರರು ಭವಿಷ್ಯದಲ್ಲಿ ಇಂಟರ್ನೆಟ್ ಜೊತೆಗೆ ಅಂಟಿಕೊಂಡಿರುವ ಸಾಧ್ಯತೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುವ ಲೆಕ್ಕಾಚಾರ ಹಾಕಿದಂತಿದೆ.  ಇದರೊಂದಿಗೆ ಕಂಪ್ಯೂಟರ್ ಜಗತ್ತಿನಲ್ಲಿ ವೈರ್ಲೆಸ್ ಹಾಗೂ ಮೊಬಿಲಿಟಿ ಆಧಾರಿತ ಹೊಸತೊಂದು ಬದಲಾವಣೆಯನ್ನೇ ತರಲು ಗೂಗಲ್ ಹೊರಟಿದೆ. ಕ್ರೊಮ್ OS ಅನ್ನು ಅಡ್ವರ್ಟೈಸ್ಮೆಂಟ್ ಅಥವಾ ಜಾಹಿರಾತುಗಳಿಗೆಂದೇ ನಿರ್ಮಿಸಲಾಗುತ್ತಿರುವ ಆಪರೇಟಿಂಗ್ ಸಿಸ್ಟಂ ಎಂದೂ ಹೇಳಬಹುದು ಅಲ್ಲದೆ ಜಗತ್ತಿನ ಎಲ್ಲ ರೀತಿಯ ಉಪಕರಣಗಳಿಗೂ ಹಾಗೂ ಕಂಪ್ಯೂಟರ್ ಪರದೆಗಳಿಗೂ ಇದನ್ನು ಬಿತ್ತರಿಸಲು ಬಳಸಬಹುದಾದ ಒಂದು ತಂತ್ರಾಂಶ ವೇದಿಕೆ (platform) ಎಂದೂ ಹೇಳಬಹುದು.

ಗೂಗಲ್ ಕ್ರೊಮ್ ಓ.ಎಸ್ ನ ರೂಪವೈಶಿಷ್ಟ್ಯ ಗಳು:-

• ARM ಹಾಗೂ x86 ಆಧಾರಿತ ಕಂಪ್ಯೂಟರ್ ಗಳ ಮೇಲೆ ಕೆಲಸ ಮಾಡುತ್ತದೆ ಹಾಗೂ ಮುಖ್ಯವಾಗಿ ಇದನ್ನು ನೆಟ್ ಬುಕ್ ಗಳಿಗೆಂದೇ ಅಭಿವೃದ್ದಿಪಡಿಸಲಾಗುತ್ತದೆ.
• ಹೊಸದೊಂದು ವಿಂಡೋಯಿಂಗ್ ಸಿಸ್ಟಂ ಅನ್ನು ಲಿನಕ್ಸ್ ಕರ್ನೆಲ್ ಮೇಲೆ  ರನ್ ಮಾಡುವ ಪ್ರಯತ್ನದಲ್ಲಿದೆ ಈ ಕ್ರೊಮ್ ಆರ್ಕಿಟೆಕ್ಚರ್
• ಕ್ರೊಮ್ ಒ.ಎಸ್ ಗೆ  ಅಭಿವೃದ್ದಿ ಪಡಿಸಲಾದ ಅಪ್ಲಿಕೇಶನ್ ಗಳು ಗೂಗಲ್ ಕ್ರೊಮ್ ಓ.ಎಸ್ ಮೇಲೆ ಕೆಲಸ ಮಾಡುವುದಲ್ಲದೆ, ವಿಂಡೋಸ್, ಮ್ಯಾಕ್ ಹಾಗೂ ಲಿನಕ್ಸ್ ನ ಯಾವುದೇ ಸ್ಟಾಂಡರ್ಡ್ ಬ್ರೌಸರ್ ಮೇಲೂ ಕೆಲಸ ಕೆಲಸ ಮಾಡಬಲ್ಲವು.
• ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಕಂಪ್ಯೂಟರ್ ಅನ್ನು ಬೂಟ್ ಮಾಡಿ ನಿಮ್ಮನ್ನು ಇಂಟರ್ನೆಟ್ ನೊಂದಿಗೆ ಸಂಪರ್ಕಿಸಲು ಅಣಿಮಾಡುವಂತೆ ಇದನ್ನು ಡಿಸೈನ್ ಮಾಡಲಾಗುತ್ತಿದೆ.
• ವೈರಸ್ ಮತ್ತು ಮಾಲ್ವೇರ್ ಗಳ ತಲೆನೋವು ಇರದಂತೆ ಅಭಿವೃದ್ದಿ ಪಡಿಸಲಾಗುತ್ತದೆ.
• ೨೦೧೦ ರ ವರೆಗೆ ಇದು ಬಳಕೆದಾರನ ನೆಟ್ ಬುಕ್ ಗಳಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಮುಂದೆ ಓದಿ

Related Articles

Related

Serendipity eBook & Print edition

Serendipity eBook & Print edition

ಡಾ. ಕಿರ‌ಣ್ ಸೂರ್ಯ ಅವರು ಬರೆದಿರುವ ಸೆರೆಂಡಿಪಿಟಿ - ವೈದ್ಯಲೋಕದ ಅದ್ಭುತ ಆಕಸ್ಮಿಕಗಳು ಇ-ಪುಸ್ತಕ ಈಗಾಗಲೇ ಸಾವಿರಾರು ಜನರನ್ನು ಫೇಸ್‌ಬುಕ್, ಟ್ವಿಟರ್, ಇಂಟರ್ನೆಟ್ ಆರ್ಕೈವ್ ಮೂಲಕ ತಲುಪಿದೆ. ಇದರ ಮುದ್ರಿತ ಪ್ರತಿ ಪಡೆಯುವ ಇಚ್ಚೆ ವ್ಯಕ್ತಪಡಿಸಿರುವ ಓದುಗರಿಗೆ, ಕನ್ನಡದ ವಿಜ್ಞಾನ ಸಾಹಿತ್ಯದ ಒಂದು ಪ್ರಯೋಗವಾಗಿ ಹಲವಾರು...

read more