Reaching out to others! Free & Open Source Software, Kannada, L10n, L18n Data Science, Cloud Computing & more…

ಚೈತ್ರೊದಯ – ಜಿ.ಎಸ್.ಎಸ್ ಕಾವ್ಯವಾಚನ

ಭಾನುವಾರ ಬೆಳಗ್ಗೆ ರವೀಂದ್ರ ಕಲಾಕ್ಷೇತ್ರ ತುಂಬಿತುಳುಕಿತ್ತು.. ತಲುಪುವ ವೇಳೆಗಾಗಲೆ ಇನ್ನೇನು ಖುರ್ಚಿಗಳೇ ಸಿಗುವುದಿಲ್ಲವೇನೋ ಎಂದು ಕೊರಗುತ್ತಲೇ ಒಳನೆಡೆದರೂ ಎಲ್ಲರಿಗೂ ಸುಲಭವಾಗಿ ಕೂಡಲು ಸಾಧ್ಯವಾಯಿತು. ಬಿ.ಸುರೇಶ್, ಮುಖ್ಯಮಂತ್ರಿ ಚಂದ್ರು ಇತರರು ಸುತ್ತಮುತ್ತಲಿದ್ದುದು ಕಂಡು ಬಂತು. ಕಾರ್ಯಕ್ರಮ ಶುರುವಾಗುತ್ತಲಿತ್ತು.

 

ಮುಂದೆ ಓದಿ…

ಇದೇನು ಅಂತ ಹೇಳ್ತೀರಾ?

 

ಈ ಚಿತ್ರ ತೆಗೆದದ್ದು ತಮಿಳುನಾಡಿನಿಂದ ವಾಪಸ್ ಬರುವ ಸಮಯದಲ್ಲಿ..

ನಿಮಗೆ ಈ ಚಿತ್ರದಲ್ಲಿರೋದು ಏನು ಅಂತ ತಿಳಿದಿದ್ರೆ ಕಾಮೆಂಟ್ ಹಾಕ್ತೀರಲ್ಲಾ?

 

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೨

ಎಲ್ಲರೂ ಕಾರಲ್ಲಿ ಕೂತಾಗಿತ್ತು. ಹಿನ್ನಲೆಯಲ್ಲಿ ಸಂಗೀತ, ಮುಂದೆ ನಾನು ರವಿ ಹೊರವಲಯಕ್ಕೆ ಸಾಗೋ ದಾರಿಯ ಹುಡುಕಾಟದಲ್ಲಿ ಬೋರ್ಡ್ ನೋಡ್ತಾ ಮುಂದೆ ಸಾಗಿದ್ವಿ. ರಾಜೀವ್ ಹೇಳಿದ ಹಾದಿ ಸುಲಭವಾಗಿ ನಮ್ಮನ್ನು ಬೆಂಗಳೂರಿನಿಂದ ಹೊರಗೆ ಕರೆದುಕೊಂಡು ಹೋಗಿತ್ತು… ಈಗಾಗಲೇ ಎಲ್ಲರೂ ಸೀಟ್ ಬೆಲ್ಟ್ ಬಿಗಿಗೊಳಿಸಿಕೊಂಡಾಗಿತ್ತು… ಮಾತುಗಳು ಸರಾಗವಾಗಿ ನಾಲಿಗೆಯ ಮೇಲೆ ಹೊರಳಲು ಶುರುವಿಟ್ಟುಕೊಂಡತೆಯೇ, ನಮ್ಮ ಕಾರು ಚಲಿಸುವ ವೇಗ ಹೆಚ್ಚಿತ್ತು….

 

ಮುಂದೆ ಓದಿ…

ಪಶ್ಚಿಮಘಟ್ಟದ ಸುತ್ತ ಚಾರಣದ ಎರಡು ದಿನ – ಭಾಗ ೧

ಚಾರಣ ಮೊದಮೊದಲು ಬರಿ ಬಂಡೆ ಹತ್ತಿ ಅಲ್ಲೆಲ್ಲಿಯೋ ಇರುವ ದೇವಸ್ಥಾನ ಇತ್ಯಾದಿ ಸುತ್ತಿ, ಒಂದೆರಡು ರಮ್ಯಮನೋಹರ ನಿಸರ್ಗಸಂಪತ್ತಿನ ಛಾಪನ್ನು ಎಷ್ಟೋ ಎತ್ತರದಿಂದ ಕಣ್ಣಲ್ಲಿ ತುಂಬಿಕೊಂಡು ಸಂಜೆಯಾಗುತ್ತಿದ್ದಂತೆ ಸರಸರನೆ ಬೆಟ್ಟದಡಿಯಿಳಿದು ಮತ್ತದೇ ದೈನಂದಿನ ಜೀವನದ ಮಾರ್ಗದೆಡೆಗೆ ಮನಸ್ಸೇ ಇಲ್ಲದೆ ನುಗ್ಗಿಬರುವುದಾಗಿತ್ತು….

 

ಮುಂದೆ ಓದಿ…

ಜಿಯೋಟ್ಯಾಗಿಂಗ್ – ಭೌಗೋಳಿಕ ಮಾಹಿತಿಗಾಗಿ

ಜಿಯೋಟ್ಯಾಗಿಂಗ್ ನಿಮ್ಮ ಛಾಯಾಚಿತ್ರಗಳು, ದೃಶ್ಯ, ವೆಬ್ಸೈಟು ಅಥವಾ ಆರೆಸ್ಸೆಸ್ ಫೀಡ್ ಇತ್ಯಾದಿಗಳಿಗೆ ಭೌಗೋಳಿಕ ವಿಳಾಸವನ್ನು ಸೇರಿಸುವ ಒಂದು ಕಾರ್ಯವಾಗಿದೆ ಮತ್ತು ಇದು geospatial metadata ಮಾದರಿಯಲ್ಲಿರುತ್ತದೆ. ಈ ದತ್ತಾಂಶಗಳು ಅಕ್ಷಾಂಶ, ರೇಖಾಂಶ ಕಕ್ಷೆ ಗಳನ್ನು ಒಳಗೊಂಡಿದ್ದು, ಅಲ್ಟಿಟ್ಯೂಡ್, ದತ್ತಾಂಶದ ನಿಖರತೆ ಹಾಗೂ ಸ್ಥಳದ ಹೆಸರು ಇತ್ಯಾದಿಗಳನ್ನೂ ಒಳಗೊಂಡಿರಬಹುದು. ಜಿ.ಪಿ.ಎಸ್ (ಗ್ಲೋಬಲ್ ಪೊಸಿಷನಿಂಗ್ ಸಿಸ್ಟಂ) ಸೇವೆ ಕೊಡುವ ಉಪಗ್ರಹಗಳಿಂದ ಈ ದತ್ತಾಂಶಗಳು ನಮ್ಮ ಜಿ.ಪಿ.ಎಸ್ ಸಾಧನದ ಮಡಿಲು ಸೇರುತ್ತವೆ.

ಜಿಯೋಟ್ಯಾಗಿಂಗ್ ಬಳಕೆ

ಜಿಯೋಟ್ಯಾಗಿಂಗ್ ಬಳಕೆದಾರರಿಗೆ ತಮ್ಮಲ್ಲಿರುವ ಚಿತ್ರದ ಅಥವಾ ಇನ್ಯಾವುದೇ ರೂಪದಲ್ಲಿರುವ ಮಾಹಿತಿಯ ನಿಖರ ವಿಳಾಸವನ್ನು ತಿಳಿಯಲು, ಹಾಗೂ ಮಾಧ್ಯಮ ವೇದಿಕೆ (media platform) ತಂತ್ರಾಂಶಗಳು(ಉದಾ: ಗೂಗಲ್ ಅರ್ಥ್)ತೋರಿಸುವ ಯಾವುದೇ ಒಂದು ಸ್ಥಳದ ಬಗ್ಗೆ ಹೆಚ್ಚಿನ ವಿವರವನ್ನು ನೀಡಲು ಬಳಸಬಹುದಾಗಿದೆ. ಮೊಬೈಲ್ ತಂತ್ರಾಶಗಳಲ್ಲಿ ಈ ತಂತ್ರಜ್ಞಾನದ ಬಳಕೆ ಸುಲಭ ಸಾಧ್ಯವಾಗಿದೆ.

 

ಮುಂದೆ ಓದಿ…

ಚಿಣ್ಣನ ನೆನಪು…

ಪುಟ್ಟ ಪುಟ್ಟ ಹೆಜ್ಜೆ ಇಟ್ಟು
ಎದ್ದು ಬಿದ್ದು ಅಡ್ಡಾದಿಡ್ಡಿ
ನಕ್ಕುನಲಿದು ಅತ್ತು ಕರೆದು
ಅಮ್ಮನ ಬಳಿಗೆ ನೆಡೆದ ಪುಟ್ಟು..

ಹಾಲುಹಲ್ಲಿನ ನಗುವ ಚೆಂದ
ಕೋಪ ಬಂದರೆ ಮುಖದ ಬಿಗುವು
ಪಪ್ಪರಮೆಂಟಿಗೆ ಹಾಕಿದ ಸೋಗು
ಎಲ್ಲಕೂ ಮಿಗಿಲು ನಾಚಿದ ಮೊಗವು..

ಶಾಲೆಗೆ ನೆಡೆಯೋ ಎಂದರೆ, ಅಮ್ಮಾ!
ಬಂದಿತು ನೋಡೋ ಹೊಟ್ಟೆಯ ನೋವು..
ಕೊಬ್ಬರಿ ಮಿಠಾಯಿ ಜೇಬಿಗೆ ತುಂಬೇ…
ಸರಸರ ನೆಡೆದನು ತುಂಟನೊ ತಿಮ್ಮ!!

ನೆಹರು ಚಾಚಾ ದಿರಿಸನು ಧರಿಸಿ
ಜೇಬಿಗೆ ರೋಜಾ ಹೂವನು ಮುಡಿಸಿ
ಠೀವಿಲಿ ಹಾಕಿದ ಹೆಜ್ಜೆಯ ಕಂಡು
ಕೆನ್ನೆಗೆ ಕೊಟ್ಟಳು ಅಮ್ಮನು ಮುದ್ದು…

–ಮಕ್ಕಳ ದಿನಾಚರಣೆಯ ಶುಭಾಶಯಗಳು

 

ಲಿನಕ್ಸಾಯಣ – ಉಬುಂಟು ಅಪ್ದೇಟ್ ಮಾಡೋದ್ ಹ್ಯಾಗೆ? ೯.೧೦ ಗೆ

ಈಗ ಕಾರ್ಮಿಕ್ ಕೊಅಲಾ ಅಂದ್ರೆ ಉಬುಂಟು ೯.೧೦ ಆವೃತ್ತಿಗೆ ನಿಮ್ಮ ಉಬುಂಟು ಹೇಗೆ ಅಪ್ಡೇಟ್ ಮಾಡಿಕೊಳ್ಳೋದು ಅಂತ ತಿಳಿದುಕೊಳ್ಳೋಣ.

ಅಪ್ಡೇಟ್ ಮಾಡುವುದಕ್ಕಿಂತ ಮುಂಚೆ ಮುಂದೆ ಓದಿ »

 

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

google-mobile-app-movie-times

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.

ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ.  ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ. ಮುಂದೆ ಓದಿ »