
ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.
ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ. ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ. ಮುಂದೆ ಓದಿ »






