Reaching out to others! Free & Open Source Software, Kannada, L10n, L18n Data Science, Cloud Computing & more…

ಫೈರ್ಫಾಕ್ಸ್ ಗೆ ೫ನೇ ಹುಟ್ಟುಹಬ್ಬದ ಸಡಗರ

Gnu/Linux, Product Info, Technical | 0 comments

ಇಂದು ಇಂಟರ್ನೆಟ್ ಬದುಕಿನ ಒಂದು ಭಾಗವಾಗಿದೆ, ಇದೇ ಒಂದು ಜೀವನವೂ ಆಗಿದೆ ಎನ್ನಬಹುದು. ಗೆಳೆಯರೊಂದಿಗೆ ಮಾತನಾಡುವುದರಿಂದ ಹಿಡಿದು, ಕೆಲಸ, ಮನೋರಂಜನೆ, ಕಲಿಕೆ, ಮಾಹಿತಿವಿನಿಮಯ, ವ್ಯಾಪಾರ, ವ್ಯವಹಾರ ಹೀಗೆ ಹತ್ತು ಹಲವು ಕೆಲಸಗಳು ನೆಡೆಯುತ್ತಿರುವುದು ಇಲ್ಲಿಯೇ…

ಸಾಮಾನ್ಯ ಜನಜೀವನ ಇಂದು ಯಾಂತ್ರಿಕತೆಯಿಂದ ದುಸ್ತರವಾಗಿದೆ ಎಂದು ಇನ್ನೂ ಮಾತನಾಡುವುದರಲ್ಲೇ ಕಾಲಕಳೆಯುತ್ತಿರುವ ನಮಗೆ, ಇಂಟರ್ನೆಟ್ ಬದುಕೂ ಕೂಡ ಮತ್ತಷ್ಟು ಜಂಜಾಟಗಳಿಂದ ಕೂಡಿದ್ದು, ಅರ್ಥಮಾಡಲಿಕ್ಕಾಗದಷ್ಟು ಕ್ಲಿಷ್ಟವೂ ಆಗುತ್ತಿರುವುದು ಇನ್ನೂ ಎಲ್ಲರಿಗೂ ಮನವರಿಕೆಯಾಗಿಲ್ಲ. ನೂರಾರು ಸಮುದಾಯ ಕಟ್ಟುವ ವೆಬ್ಸೈಟ್ ಗಳು ಇತ್ಯಾದಿ ದಿನದಿನಕ್ಕೆ ಬೆಳೆಯುತ್ತಲೇ ಇದೆ. ಇಂಟರ್ನೆಟ್ ಜನರಿಗೆ ಹೊಸ ಜಗತ್ತನ್ನು ತೋರಿಸಿದಾಗ ಇದ್ದ ವೈರಸ್, ಮಾಲ್ವೇರ್, ಪಾಪ್-ಅಫ್ ಇತ್ಯಾದಿ ತೊಂದರೆಗಳು ಇಂದು ಇನ್ಯಾವುದೋ ಎತ್ತರಕ್ಕೆ ಹೋಗಿ ಮುಟ್ಟಿದೆ. ಆದರೆ, ೨೦೦೪ ರಲ್ಲಿಯೇ ಇಂತಹ ಸಮಸ್ಯೆಗಳನ್ನೆಲ್ಲಾ ನೋಡಿ, ಇಲ್ಲೇನೋ ಕಳೆದಂತಿದೆಯಲ್ಲ ಎಂದು ಅರಿತು, ಜನರಿಗೆ ಇಂಟರ್ನೆಟ್ ನಲ್ಲೇ ಸಮೃದ್ದ ಬದುಕು ಬೇಕಾದಲ್ಲಿ ಅದನ್ನು ಬಳಸಲು ಬೇಕಿರುವ ತಂತ್ರಾಂಶ, ತಂತ್ರಜ್ಞಾನಗಳನ್ನು ಅವರೇ, ತಮ್ಮ ಅವಶ್ಯಕತೆಗೆ ತಕ್ಕಂತೆ ಸೃಷ್ಟಿಸಿ, ಬೆಳಸಿ ಬಳಸ ಬೇಕಾದ ಅವಶ್ಯಕತೆಯನ್ನು ಫೈರ್ಫಾಕ್ಸ್ ಕಂಡುಕೊಂಡಿತ್ತು. ಎಲ್ಲರಿಗಾಗಿ, ಎಲ್ಲರಿಂದ ಸ್ವತಂತ್ರ ಹಾಗೂ ಮುಕ್ತ ತಂತ್ರಾಂಶದ ಒಂದು ಬಹು ಅಮೂಲ್ಯ ಕೊಡುಗೆಯಾಗಿ ಹೊರ ಬಂದ ಫೈರ್ಫಾಕ್ಸ್ ಬ್ರೌಸರ್, ಹೊಸದಾದ ಸಮೃದ್ದ ಅನ್ಲೈನ್ ಜಗತ್ತನ್ನೇ ನಮ್ಮ ಮುಂದಿಟ್ಟಿದೆ ಎನ್ನಬಹುದು. ಇಂದು ಫೈರ್ಫಾಕ್ಸ್ ಗೆ ೫ ವರ್ಷ. ಸಮುದಾಯವೊಂದು ಈ ತಂತ್ರಾಂಶವನ್ನು ಅದೆಷ್ಟು ಪ್ರೌಡನನ್ನಾಗಿಸಿದೆ ಎಂದರೆ, ಖಾಸಗಿ ಸಂಸ್ಥೆಗಳು ಮಿಲಿಯನ್ ಗಟ್ಟಲೆ ಹಣ ಸುರಿದು ತಯಾರಿಸಿ ಮಾರುಕಟ್ಟೆಗಿಳಿಸಿದ ಬ್ರೌಸರ್ ಗಳೂ ಕೂಡ ಇಂತಹ ಯೋಜನೆಗಳಿಂದ ನಿದ್ದೆಗೆಟ್ಟು ತಮ್ಮಲ್ಲಿರುವ ನ್ಯೂನ್ಯತೆಗಳನ್ನು ಬೇಗ ಬೇಗ ನಿವಾರಿಸಲು ಹಗಲು ರಾತ್ರಿ ಶ್ರಮಿಸುತ್ತಿವೆ.

ನಿಮಗಿದು ಗೊತ್ತೇ?:- ಫೈರ್ಫಾಕ್ಸ್ ಬಳಸುತ್ತಿರುವ ನೀವೂ ಕೂಡ ಈ ಸಮುದಾಯದ ಒಂದು ಕೊಂಡಿ… ನಿವೂ ಕೂಡ ಈ ಯಶಸ್ಸಿಗೆ ಕಾರಣಕರ್ತರು.

[wp_youtube]qRtsG6CgQyM[/wp_youtube]

ನಿಮ್ಮ ದಿನನಿತ್ಯದ ವ್ಯವಹಾರಗಳಿಗೆ ಸುರಕ್ಷಿತ ವೆಬ್ ಬ್ರೌಸರ್ ಕೊಟ್ಟ ಫೈರ್ಫಾಕ್ಸ್ ಯೋಜನೆಗೆ ಶುಭಾಶಯ ಹೇಳ್ತೀರಲ್ವಾ?

Related Articles

Related