ಕಳೆದ ದಿನಗಳ ಹಳೆಯ
ನೆನಪುಗಳ ನೆನೆನೆನೆದು
ನೀರಿನೆಲೆಯ ಸೆಳೆತಕೆ
ಕಳೆದು ಹೋಗುತಲಿಹಳು
ತನ್ನ ಇನಿಯನ ಮನೆಯ
ಆ ದಡವ ಸೇರುವುದು
ಹೇಗೆಂದು ಚಿಂತಿಸುತ
ಕಾಲ ಕಳೆದಿಹಳು
ಈ ಸಂಜೆಗತ್ತಲಲಿ
ನೀರ ಜೊತೆ ನೀರೆಯ
ಹತ್ತಾರು ಮಾತುಕತೆ
ಮನೆಯ ಮಾಡಿಹುದು
ತಂಗಾಳಿ ಜೊತೆ ಸೇರಿ
ಹಾರುವದೋ, ಇಲ್ಲ..
ಆ ಮೀನ ಜೊತೆಗೆ
ಈಜಲೆಣಿಸಲೊ ನಾನು?
ಪ್ರಶ್ನೆಗಳ ಉತ್ತರಿಸೆ
ಕನಸಲಿ ತಾ ಬಂದು
ತನ್ನ ಮನೆಗೆನ್ನ ಕರೆದೊಯ್ಯ
ಬಹುದೇ ಗೆಳೆಯ?
– ಕಾವೇರಿಯ ದಡದಲ್ಲಿ ಕುಳಿತರೆ ಇನ್ನೂ ನೂರು ಆಲೋಚನೆಗಳು ನಿಮ್ಮಲ್ಲೂ ಮನೆಮಾಡಬಹುದಲ್ಲ…
ಚಿತ್ರ:- ಪೃಥ್ವಿ – ವಿಜಯ್ ಶಂಕರ್ ಅಲ್ಬಂ ನಿಂದ






