ಆನ್ ಲೈನ್ ವಿಶ್ವಕೋಶ ವಿಕಿಪೀಡಿಯಾ ಯಾರಿಗೆ ತಾನೆ ತಿಳಿದಿಲ್ಲ. ವಿಶ್ವದ ಜನರ ಎಲ್ಲ ಜ್ಞಾನವನ್ನು ಮನುಷ್ಯನ ಅಂಗೈಗೆ ಉಚಿತವಾಗಿ ಎಟುಕುವಂತೆ ಮಾಡುವ ಈ ಒಂದು ಯೋಜನೆ, ಈಗ ನಿಮ್ಮ ಬೆರಳುಗಳ ಒಂದೆರಡು ಕೀಲಿಗಳನ್ನು ಕುಟ್ಟುವಷ್ಟೇ ದೂರ ಅಲ್ಲವೇ?

ಮಕ್ಕಳ ಶಾಲಾ ಚಟುವಟಿಗೆಗಳಿಂದ ಹಿಡಿದು, ಪ್ರಯೋಗ, ಅಧ್ಯಯನ ಇತ್ಯಾದಿಗಳಿಗೆ ಬೇಕಾದ ಸಂಕೀರ್ಣ ವಿಷಯಗಳನ್ನು ತನ್ನಲ್ಲಿ ಅಡಗಿಸಿಟ್ಟುಕೊಂಡಿರುವ ವಿಕಿಪೀಡಿಯಾ ಈಗ ಆಫ್ ಲೈನ್ ಆಗಿ ಕೂಡ ಸಿಗುತ್ತದೆ. ಅಂದರೆ ಇಂಟರ್ನೆಟ್ ಇಲ್ಲದೆಯೂ ಎಲೆಕ್ಟ್ರಾನಿಕ್ ಪುಸ್ತಕದ ಮೂಲಕ ವಿಕಿಪೀಡಿಯಾ ಎಲ್ಲಿಬೇಕಾದರೂ, ಯಾವಾಗಲಾದರೂ ಓದಬಹುದು. ಮಕ್ಕಳನ್ನು ಅಶ್ಲೀಲ ಲೇಖನಗಳಿಂದ ದೂರ ಕೂಡ ಇಡಬಹುದು. ಅದನ್ನು ಸಾಧ್ಯವಾಗಿಸಿರುವುದು – ವಿಕಿ ರೀಡರ್!

ಭಾರತದಲ್ಲಿ ಸಿಗುವಂತಾದರೆ ೩ ಲಕ್ಷಕ್ಕೂ ಹೆಚ್ಚು ವಿಕಿ ಲೇಖನಗಳ ಭಂಡಾರ ನಮ್ಮ ಕಿಸೆಯಲ್ಲಿ…

wikireader

Imagine a world in which every single person on the planet is given free access to the sum of all human knowledge.

— Jimmy Wales, Founder of Wikipedia

ಈ ವಿಡಿಯೊದಲ್ಲಿ ವಿಕಿ ರೀಡರ್ ನ ಪ್ರಾತ್ಯಕ್ಷಿಕೆ ನೋಡಿ:-