Reaching out to others! Free & Open Source Software, Kannada, L10n, L18n Data Science, Cloud Computing & more…

ಗೂಗಲ್ ವಾಯ್ಸ್ ಸರ್ಚ್ ವಿಶ್ವ ಸುತ್ತಿ ನೋಕಿಯಾ ಹುಡುಕಿ, ಚೈನೀಸ್ ಕಲಿತ ಕಥೆ

Product Info | 0 comments

google-mobile-app-movie-times

ಗೂಗಲ್ ಸರ್ಚ್ ನ ವಾಯ್ಸ್ ಆವೃತ್ತಿ ಇಂಗ್ಲಿಷ್ ಮಾತನಾಡುವವರ ಪ್ರಪಂಚವನ್ನೆಲ್ಲಾ ಸುತ್ತಿ ಎಲ್ಲರ ಮಾತನಾಡುವ ಪರಿಯನ್ನು ಅರಿತು, ಬೆಳೆದು ನಿಂತಿದೆ. ಅಮೇರಿಕಾ, ಯುನೈಟೆಡ್ ಕಿಂಗ್ಡಮ್, ಆಸ್ಟ್ರೇಲಿಯಾ, ಭಾರತ ಹೀಗೆ ಹಲವು ದೇಶಗಳಲ್ಲಿ ಮಾತನಾಡುವ ಇಂಗ್ಲೀಷ್ ಅಸ್ಸೆಂಟ್ ಅನ್ನು ಇದು ಅರ್ಥ ಮಾಡಿಕೊಳ್ಳಬಲ್ಲದು. ಈಗ ಹೊಸ ಸುದ್ದಿ ಹೊರ ಬಿದ್ದಿದೆ. ನೋಕಿಯಾ ಎಸ್ ೬೦ ಮೊಬೈಲ್ ಗೂಗಲ್ ವಾಯ್ಸ್ ಸರ್ಚ್ ಹೊಂದಿದ್ದು, ಮ್ಯಾಂಡ್ರಿನ್ ಚೈನೀಸ್ ಅರ್ಥ ಮಾಡಿಕೊಳ್ಳುತ್ತದಂತೆ. ಗೂಗಲ್ ಬ್ಲಾಗ್ ಈ ವಿಷಯವನ್ನು ಹೊರಹಾಕಿದೆ.

ನೋಕಿಯಾದ ಎಸ್ ೬೦ ಫೋನ್ಗಳು ವಿಶ್ವದಾದ್ಯಂತ ಅತ್ಯಂತ ಪ್ರಸಿದ್ದಿ ಪಡೆದಿವೆ.  ನೀವೇನಾದರೂ ನೋಕಿಯಾ ಎನ್-ಸೀರೀಸ್ ಅಥವಾ ಇ-ಸೀರೀಸ್ ಫೋನ್ ಬಳಸುತ್ತಿದ್ದರೆ, ನೀವೂ ಕೂಡ ಎಸ್-೬೦ ಬಳಸುತ್ತೀರಿ ಎಂದರ್ಥ. ೧೨ ಗುಂಡಿಗಳ ಕೀ-ಪ್ಯಾಡ್ ಹೊಂದಿರುವ ಈ ಫೋನ್ ಗಳು ಕಾಲ್ ಮಾಡ್ಲಿಕ್ಕೆ ಸಮರ್ಥ ಆದ್ರೆ ಟೈಪ್ ಮಾಡ್ಲಿಕ್ಕೆ ಸ್ವಲ್ಪ ಕಷ್ಟ ಅಂತ್ಲೇ ಹೇಳಬಹುದು. ಅದರಿಂದಲೇ ಗ್ರಾಹಕರ ಆಗ್ರಹದ ಮೇರೆಗೆ ಗೂಗಲ್ ಸರ್ಚ್ ಅನ್ನು ವಾಯ್ಸ್ ಅಂದ್ರೆ ಧ್ವನಿಯ ಮೂಲಕ ಕೆಲಸ ಮಾಡುವಂತೆ ಮಾಡ್ಲಿಕ್ಕೆ ಆ ಒಂದು ಹೊಸ ತಂತ್ರಾಂಶವನ್ನು ತನ್ನ ಫೋನ್ ನಲ್ಲಿ ಅಳವಡಿಸಲು ನೋಕಿಯಾ ಶ್ರಮಪಡುತ್ತಿದೆ.

ಹೊಸ ಗೂಗಲ್ ಮೊಬೈಲ್ ತಂತ್ರಾಂಶ ನಿಮ್ಮ ಮೊಬೈಲ್ ಮುಖ ಮುಟದಲ್ಲಿ ಗೂಗಲ್ ಸರ್ಚ್ ನ ಗುಂಡಿಯೊಂದನ್ನು ಸೇರಿಸುತ್ತದೆ. ನಿಮ್ಮ ಸರ್ಚ್ ಪದವನ್ನು ಟೈಪ್ ಮಾಡದೆ, ಧ್ವನಿಯ ಮೂಲಕವೇ ಗ್ರಹಿಸಿ ಅದನ್ನು ಸರ್ಚ್ ಮಾಡುವುದು ಇಂದು ಸಾಧ್ಯವಿದೆ. ಮಸಾಲೆ ದೋಸೆ, ಬೆಂಗಳೂರು ಇತ್ಯಾದಿ ಸರ್ಚ್ ಮಾಡ್ಲಿಕ್ಕೆ ಸಾಧ್ಯ.. ಇದರೊಂದಿಗೆ ನೀವು ಇರುವ ಪ್ರದೇಶದ ಸುತ್ತಮುತ್ತಲಿನಲ್ಲಿ ಸರ್ಚ್ ಮಾಡಿದ ವಸ್ತುಗಳು ಅಥವಾ ವಿಳಾಸ ಹತ್ತಿರದಲ್ಲಿ ಸಿಗುತ್ತದೆಯೇ ಎಂಬ ವಿಷಯ ಕೂಡ ಸರ್ಚ್ ಫಲಿತಾಂಶದಲ್ಲಿ ದೊರೆಯುತ್ತದೆ. ಇದಕ್ಕೆ ಮತ್ತೆ ನಿವು ಬ್ರೌಸರ್ ತೆರೆಯ ಬೇಕಿಲ್ಲವಾದ್ದರಿಂದ ತುಂಬಾ ಸುಲಭವಾಗಿ ಉಪಯೋಗಕ್ಕೆ ಬರುತ್ತದೆ.

ನೋಕಿಯಾ ಗೂಗಲ್ ಸರ್ಚ್ ಅನ್ನು ಬಳಸುತ್ತಿರುವ ಈ ವಿಡಿಯೋ ನೋಡಿ:-

 

ಮ್ಯಾಂಡ್ರಿನ್ ಚೈನೀಸ್ ಭಾಷೆಗೆ ಗೂಗಲ್ ಸರ್ಚ್ ಕೆಲಸ ಮಾಡುವಂತೆ ಮಾಡಿರುವ ನೋಕಿಯಾ ಎಂಜಿನಿಯರ್ ಗಳ ಕೆಲಸ, ತಂತ್ರಜ್ಞಾನದ ಮಟ್ಟಿಗೆ ಅವರ ಮುಂದಿದ್ದ ಪ್ರಶ್ನೆಗಳು ಇತ್ಯಾದಿಯನ್ನು ಗೂಗಲ್ ಬ್ಲಾಗ್ ನ ಈ ಕೊಂಡಿಯಲ್ಲಿ  ಓದಬಹುದು.

 

Related Articles

Related